13. ತರುವಾಯ ಅವರು ಕರಾರು ಉಲ್ಲಂಘಿಸಿದ ನಿಮಿತ್ತ ನಾವು ಅವರನ್ನು ಶಪಿಸಿದೆವು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸಿದೆವು. ಅವರು ಗ್ರಂಥದ ವಾಕ್ಯಗಳನ್ನು ಅವುಗಳ ಸ್ಥಳದಿಂದ ಸ್ಥಾನಾಂತರಗೊಳಿಸುತ್ತಿರುವರು.[147] ಅವರಿಗೆ ಉಪದೇಶ ನೀಡಲಾಗಿರುವುದರಲ್ಲಿ ಒಂದಂಶವನ್ನು ಅವರು ಮರೆತುಬಿಟ್ಟರು. ಅವರ ಪೈಕಿ ಕೆಲವರ ಹೊರತು ಅವರು ಮಾಡುತ್ತಿರುವ ವಂಚನೆಯನ್ನು ತಾವು (ಮುಂದೆಯೂ) ಕಾಣುತ್ತಲೇ ಇರುವಿರಿ. ತಾವು ಅವರನ್ನು ಮನ್ನಿಸಿರಿ ಮತ್ತು ಕಡೆಗಣಿಸಿರಿ. ಖಂಡಿತವಾಗಿಯೂ ಉತ್ತಮ ರೀತಿಯಲ್ಲಿ ವರ್ತಿಸುವವರನ್ನು ಅಲ್ಲಾಹು ಮೆಚ್ಚುವನು.