الترجمة الكنادية-

صفحة 188

كَيۡفَ وَإِن يَظۡهَرُواْ عَلَيۡكُمۡ لَا يَرۡقُبُواْ فِيكُمۡ إِلّٗا وَلَا ذِمَّةٗۚ يُرۡضُونَكُم بِأَفۡوَٰهِهِمۡ وَتَأۡبَىٰ قُلُوبُهُمۡ وَأَكۡثَرُهُمۡ فَٰسِقُونَ ٨

8. ಅದು (ನೆಲೆನಿಲ್ಲುವುದು) ಹೇಗೆ? ಅವರು ನಿಮ್ಮ ಮೇಲೆ ಗೆಲುವು ಸಾಧಿಸುವುದಾದರೆ ನಿಮ್ಮ ವಿಷಯದಲ್ಲಿ ಕುಟುಂಬ ಸಂಬಂಧವನ್ನೋ ಒಪ್ಪಂದವನ್ನೋ ಅವರು ಪರಿಗಣಿಸಲಾರರು. ಅವರು ತಮ್ಮ ಬಾಯಿ ಮೂಲಕ ನಿಮ್ಮನ್ನು ಸಂತೃಪ್ತಗೊಳಿಸುವರು. ಆದರೆ ಅವರ ಮನಸ್ಸುಗಳು ಅಸಹ್ಯಪಡುವುವು. ಅವರ ಪೈಕಿ ಹೆಚ್ಚಿನವರೂ ಧಿಕ್ಕಾರಿಗಳಾಗಿರುವರು.